We're accustomed to glamour in London SE26: Kelly Brook and Jason Statham used to live above the dentist. But when Anouska Hempel's heels hit the cracked cement of the parking space outside my flat, it's hard not to think of those Picture Post photographs of royalty visiting bombed-out families during the second world war. Her mission in my modest tract of suburbia is, however, about more than offering sympathy. Hempel—the woman who invented the boutique hotel before it bore any such proprietary name—has come to give me information for which, judging by the spreads in interiors magazines and anxious postings on online DIY forums, half the property-owners in the Western world seem desperate: how to give an ordinary home the look and the vibe of a five-star, £750-a-night hotel suite. To Hempelise, in this case, a modest conversion flat formed from the middle slice of a three-storey Victorian semi.
"You could do it," she says, casting an eye around my kitchen. "Anyone could do it. Absolutely no reason why not. But there has to be continuity between the rooms. A single idea must be followed through." She looks out wistfully over the fire escape. "And you'd have to buy the house next door, of course." That's a joke. I think.
...
It's worth pausing, though, to consider the oddness of this impulse. The hotel room is an amnesiac space. We would be troubled if it bore any sign of a previous occupant, particularly as many of us go to hotels in order to do things we would not do at home. We expect a hotel room to be cleaned as thoroughly as if a corpse had just been hauled from the bed. (In some cases, this will actually have happened.) The domestic interior embodies the opposite idea: it is a repository of memories. The story of its inhabitants ought to be there in the photos on the mantelpiece, the pictures on the wall, the books on the shelves. If hotel rooms were people, they would be smiling lobotomy patients or plausible psychopaths. ![](https://cfcdn.proz.com/images/pftv6/dark_arr_down.gif) | Winning entries could not be determined in this language pair.There was 1 entry submitted in this pair during the submission phase. Not enough entries were submitted for this pair to advance to the finals round, and it was therefore not possible to determine a winner.
Competition in this pair is now closed. |
ಲಂಡನ್ ಎಸ್ಈ26 ನಲ್ಲಿ ನಾವಂತೂ ಥಳಕು-ಬಳುಕಿನ ಜೀವನಕ್ಕೆ ಒಗ್ಗಿ ಹೋಗಿದ್ದೇವೆ. ಕೆಲ್ಲಿ ಬ್ರೂಕ್ ಹಾಗು ಸ್ಟೈಥಮ್, ದಂತ ವೈದ್ಯರ ಮನೆಯ ಮೇಲ್ಭಾದಲ್ಲಿ ವಾಸಿಸುತ್ತಿದ್ದರು. ಆದರೆ ಅನೌಸ್ಕಾ ಹೆಂಪೇಲ್ ನ ಹಿಮ್ಮಡಿಯು ನನ್ನ ಫ್ಲ್ಯಾಟ್ ನ ಹೊರ ಭಾಗದಲ್ಲಿರುವ ಪಾರ್ಕಿಂಗ್ ಜಾಗದಲ್ಲಿ ಸೀಳು ಬಿಟ್ಟ ಸಿಮೆಂಟಿನ ಜಾಗದಲ್ಲಿ ತಗುಲಿದಾಗ, ಅನಾಯಾಸವಾಗಿ ಎರಡನೆ ವಿಶ್ವ ಯುದ್ಧ ನಡೆದಾಗ ಬಾಂಬುಗಳ ಸುರಿಮಳೆಯಿಂದಾಗಿ ಸ್ಧಳಾಂತರಗೊಂಡ ಕುಟುಂಬಗಳ ಯೋಗಕ್ಷೇಮ ವಿಚಾರಿಸಲು ಬಂದ ರಾಜ ಪರಿವಾರದ ಸದತ್ಯರ ಭಾವ ಚಿತ್ರಗಳು ಕಣ್ಮುಂದೆ ಹರಿದಾಡಿದಂತೆ ಭಾಸವಾಗಿರುವುದನ್ನು ಒಪ್ಪಿಕೊಳ್ಳಲೇ ಬೇಕು. ಆದರೆ ಉಪ ನಗರದಲ್ಲಿ ನನ್ನ ಸಾಧಾರಣವಾದ ಮನೆಯ ಬಗ್ಗೆ ಕನಿಕರ ತೋರುವ ಉದ್ದೇಶ ಅವರದಾಗಿರಲಿಲ್ಲ. ಮಾಲಿಕತ್ವದ ಹೆಸರು ಸಿಗುವ ಮೊದಲೇ ಬುಟಿಕ್ ಹೋಟೆಲ್ ಕಂಡುಹಿಡಿದ ಹೆಂಪೆಲ್, ನನಗೆ ಎಂತಹ ವಿಷಯ ತಿಳಿಸಲು ಬಂದಿದ್ದಾರೆಂದರೆ, ಅದರ ಬಗ್ಗೆ, ಗೃಹಾಲಂಕರಣದ ಕುರಿತು ಪತ್ರಿಗೆಗಳಲ್ಲಿ ಪ್ರಕಟಗೊಂಡ ಚಿತ್ತಾಕರ್ಷಕ ಚಿತ್ರಗಳು ಹಾಗು ಆನ್ ಲೈನ್ ಡೀವೀಸೀ ವೇದಿಕೆಗಳಲ್ಲಿ ತಲ್ಲಣಗೊಳಿಸುವಂತಹ ಪೋಸ್ಟಿಂಗಳನ್ನು ನೋಡಿದಾಗ ಪಾಶ್ಚಿಮಾತ್ಯ ದೇಶಗಳಲ್ಲಿ ಸಂಪದ್ಭರಿತ ಮಾಲೀಕರಲ್ಲಿ ಅರ್ಧದಷ್ಟು, ಹತಾಶರಾಗಿರುವಂತೆ ಭಾಸವಾಗುತ್ತದೆ:ಒಂದು ಸಾಧಾರಣವಾದ ಮನೆಯನ್ನು, ಒಂದು ರಾತ್ರಿ ತಂಗಲು £750 ಶುಲ್ಕವನ್ನು ತೆಗೆದುಕೊಳ್ಳುವ ಪಂಚ ತಾರಾ ಹೊಟೇಲ್ ಸೂಟ್ ನ ಹಾಗೆ ಥಳಥಳಿಸುವಂತೆ ಹಾಗು ಆಕರ್ಷಕಮಯವಾಗಿ ರೂಪುಗೊಳಿಸುವ ಬಗೆ ಹೇಗೆ. ಹೆಂಪೆಲ್ ನಂತೆ ಯೋಚಿಸುವುದಾದರೆ, ಮೂರು ಮಜಲಿನ ಅರ್ಧ-ವಿಕ್ಟೋರಿಯನ್ ಬಂಗಲೆಯ ಮಧ್ಯಭಾಗವನ್ನು ಸೀಳಿ ಮಾಮೂಲಿ ಫ್ಲ್ಯಾಟ್ ನಂತೆ ಮಾರ್ಪಾಡಿಸುವಂತಿದೆ ಇದರ ಪರಿ. ನನ್ನ ಅಡಿಗೆ ಮನೆಯತ್ತ ಕಣ್ಣು ಹಾಯಿಸುತ್ತ ಅವರು ಹೇಳ್ತಾರೆ " ನೀವು ಕೂಡ ಇದನ್ನು ಸಾಧಿಸಬಹುದು" "ಹಾಗೆ ನೋಡಿದರೆ ಇದನ್ನು ಯಾರು ಬೇಕಾದರೂ ಮಾಡಿ ತೋರಿಸಬಹುದು. ಇದು ಯಾಕಾಗಬಾರದು ಎನ್ನುವುದಕ್ಕೆ ಯಾವುದೇ ನಿಖರವಾದ ಕಾರಣವಳಂತೂ ಇಲ್ಲ. ಆದರೆ ಕೊಠಡಿಗಳ ಮಧ್ಯೆ ಯಾವುದೇ ತೆರಪಿರಬಾರದು, ಅಷ್ಟೆ. ಒಂದೇ ವಿಚಾರವನ್ನು ಎಲ್ಲೆಡೆಯೂ ಅಳವಡಿಸಿರಬೇಕು." ಬೆಂಕಿ ಬಿದ್ದಾಗ ತಪ್ಪಿಸುಕೊಳ್ಳಲು ಅಳವಡಿಸಿರುವ ಬೆಂಕಿ ಕಿಂಡಿಯತ್ತ ಹಾತೊರೆಯುವ ಭಾವದಿಂದ ನೋಡುತ್ತ ಹೇಳುತ್ತಾರೆ "ಆದರೆ ನೀವು ನಿಮ್ಮ ಪಕ್ಕದ ಮನೆಯನ್ನು ಕೊಳ ಬೇಕಾಗುತ್ತದೆ." ನನಗೆ ಯಾಕೋ, ಇವರು ತಮಾಶೆ ಮಾಡ್ತಾ ಇದ್ದಾರೆ ಅನಿಸಿತು. ಆದರೂ ಈ ವಿಚಿತ್ರವಾದ ಪ್ರೇರಣೆಯತ್ತ ಗಮನ ಹರಿಸುವುದು ಒಳಿತು. ಹೊಟೇಲ್ ನ ಕೋಣೆಗಳು ವಿಸ್ಮರಣೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗಾಗಿಯೇ ಮೀಸಲಾಗಿರುತ್ತವೆ. ಆ ಕೋಣೆಯಲ್ಲಿ ಈ ಮೊದಲು ತಂಗಿದವರ ಕುರುಹುಗಳು ಸಿಕ್ಕಿದಲ್ಲಿ ನಮ್ಮ ಪಾಡಂತೂ ಹೇಳಲಸಾಧ್ಯ. ಯಾಕೆಂದರೆ ನಮ್ಮಲ್ಲಿ ಬಹುತೇಕರು ಮನೆಯಲ್ಲಿ ಸಾಧ್ಯವಾಗದ ಚಟುವಟಿಕೆಗಳನ್ನು ನಡೆಸಲು ಇಂತಹ ತಾಣಗಳ ಮೊರೆ ಹೋಗುತ್ತಾರೆ. ನಾವು, ಕೋಣೆಗಳು ಎಷ್ಟು ಸ್ವಚ್ಛ-ಶುಭ್ರವಾಗಿರಬೇಕೆಂದು ಬಯಸುತ್ತೇವೆಯೆಂದರೆ ಅದರ ಹಾಸಿಗೆಯಿಂದ ಸ್ವಲ್ಪ ಹೊತಿನ ಮುಂಚೆ ಶವವನ್ನು ಎಳೆದುಕೊಂಡು ಹೋದ ನಂತರ ಸ್ವಚ್ಛಗೊಳಿಸಿರುವಂತೆ ಭಾಸವಾಗಬೇಕು. (ಕೆಲವು ಪ್ರಕರಣಗಳಲ್ಲಿ ಹೀಗೆ ನಿಜವಾಗಿಯೂ ಆಗಿರಲೂ ಬಹುದು) ಮನೆಯ ಒಳಾಂಗಣದಲ್ಲಿ ಇದರ ತದ್ವಿರುದ್ಧ ವಿಚಾರಗಳು ಮೂಡುತ್ತವೆ. ಇದರಲ್ಲಿ ನೆನಪುಗಳ ಸರಮಾಲೆಯೇ ಹೆಣೆದಿರುತ್ತದೆ. ಇವುಗಳಲ್ಲಿ ವಾಸಿಸುವವರ ಕಥೆಗಳು ಬೆಂಕಿ ಗೂಡಿನ ಚೌಕಟ್ಟು, ಗೋಡೆಗಳ ಮೇಲೆ ಹಾಕಿರುವ ಭಾವ ಚಿತ್ರಗಳು, ಶೆಲ್ಫ್ ಮೇಲೆ ಇಟ್ಟಿರುವ ಪುಸ್ತಕಗಳ ಮೇಲೆ ಕಾಣಿಸಿಕೊಳ್ಳುವುದು ಚೆನ್ನ. ಹೊಟೇಲ್ ನ ಕೋಣೆಗಳು ಜೀವಂತ ವ್ಯಕ್ತಿಗಳಾಗಿದ್ದಿದ್ದರೆ, ಮೆದುಳಿನ ಶಲ್ಯ ಚಿಕಿತ್ಸೆ ಮಾಡಿಸಿ ಕೊಂಡಿರುವ ರೋಗಿಗಳಂತೆ ಅಥವ ಮೇಲು ನೋಟಕ್ಕೆ ಸರಿಯಾಗಿರುವಂತೆ ತೋರುವ ಮನೋರೋಗಿಗಳ ಹಾಗೆ ಮಂದಹಾಸ ಬೀರುತ್ತಿರುವಂತೆ ತೋರುತ್ತಿದ್ದವು.
![](https://cfcdn.proz.com/images/pftv6/dark_arr_down.gif) | Entry #13870 — Discuss 0
|